ರುದ್ರತತ್ವ ಲಿಂಗಮೂರ್ತಿಯಾಗಿ, ಈಶ್ವರತತ್ವ ಶರಣಮೂರ್ತಿಯಾಗಿ,
ಸದಾಶಿವತತ್ವ ಐಕ್ಯಕೂಟಸ್ಥವಾಗಿ, ನಾಮರೂಪ ಭಾವವಳಿದಲ್ಲಿ,
ಪರಶಿವಮೂರ್ತಿ ಪರಾಪರದೊಳಗಾಯಿತ್ತು.
ಅದು ಅವರೋಹಾರೋಹವಾದಲ್ಲಿ,
ಬಸವಣ್ಣ ಚೆನ್ನಬಸವಣ್ಣನೆಂದು ಒಂದು ಮೂರಾಗಿ,
ಮೂರು ಆರಾಗಿ, ಆರು ಮಿಶ್ರವಾಗಿ,
ನೂರೊಂದರಲ್ಲಿ ತೋರಿಹ ಸ್ಥಲ ಕುಳಂಗಳೆಲ್ಲ
ಸುವರ್ಣದ ಸಾರದಂತೆ ಉರಿಗೆ ಕರಗಿ, ಉರಿಯಡಗೆ ಮುನ್ನಿನಂತಿರವು.
ಆ ತೆರವಾದ ಸ್ಥಲಕುಳ ವಿವರ, ಸ್ಫಟಿಕದ ಬಹುವರ್ಣದಂತೆ.
ವರ್ಣವಳಿಯೆ ಘಟವುಳಿದ ಮತ್ತೆ, ಮುನ್ನಿನಂದ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Rudratatva liṅgamūrtiyāgi, īśvaratatva śaraṇamūrtiyāgi,
sadāśivatatva aikyakūṭasthavāgi, nāmarūpa bhāvavaḷidalli,
paraśivamūrti parāparadoḷagāyittu.
Adu avarōhārōhavādalli,
basavaṇṇa cennabasavaṇṇanendu ondu mūrāgi,
mūru ārāgi, āru miśravāgi,
nūrondaralli tōriha sthala kuḷaṅgaḷella
suvarṇada sāradante urige karagi, uriyaḍage munninantiravu.
Ā teravāda sthalakuḷa vivara, sphaṭikada bahuvarṇadante.
Varṇavaḷiye ghaṭavuḷida matte, munninanda,
niḥkaḷaṅka mallikārjunā.