ರಿಣಾತೂರ್ಯ, ಮುಕ್ತ್ಯಾತೂರ್ಯ, ಸ್ವೇಚ್ಫಾತೂರ್ಯ.
ಇಂತೀ ಮಾಟವ ಮಾಡುವಲ್ಲಿ, ಉಂಡಲ್ಲಿ ಓಗರ ವಾಂತಿಯಾದಂತೆ,
ತಾ ಮಾಡಿದ ಸುಖ ತನಗೆ ದುಃಖವಹ ಭೇದಮಂ ಬಿಟ್ಟು,
ಸ್ವೇಚ್ಫಾತೂರ್ಯವೆಂಬ ತುದಿಯಲ್ಲಿ ನಿಂದು,
ಆ ತೂರ್ಯವಂ ಬಿಟ್ಟು ತುದಿಯಲ್ಲಿ ನಿಂದು,
ಒಡೆಯನು ಕೈಲೆಡೆಯ ಮಡಗಿರಲಾಗಿ ಕೇಳಿದಡೆ,
ಒಡೆಯಂಗೆ ಒಡವೆಯಂ ಕೊಟ್ಟು, ದೃಢಚಿತ್ತದಲ್ಲಿರ್ಪವಂಗೆ
ಪೊಡವಿಯ ಮಾಟಕೂಟದಾಟದವರು ಸರಿಯೆ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Riṇātūrya, muktyātūrya, svēcphātūrya.
Intī māṭava māḍuvalli, uṇḍalli ōgara vāntiyādante,
tā māḍida sukha tanage duḥkhavaha bhēdamaṁ biṭṭu,
svēcphātūryavemba tudiyalli nindu,
ā tūryavaṁ biṭṭu tudiyalli nindu,
oḍeyanu kaileḍeya maḍagiralāgi kēḷidaḍe,
oḍeyaṅge oḍaveyaṁ koṭṭu, dr̥ḍhacittadallirpavaṅge
poḍaviya māṭakūṭadāṭadavaru sariye,
niḥkaḷaṅka mallikārjunā?