Index   ವಚನ - 678    Search  
 
ಲಿಂಗಬಾಹ್ಯಂಗೆ ಲಿಂಗಬಾಹ್ಯನಾಗಬೇಕಲ್ಲದೆ, ಸುಜಾತಿ ವಿಜಾತಿಯ ಬೆರಸಿದುದುಂಟೆ ? ಇಂತೀ ಆರು ಶೈವವ ಹೊದ್ದದ ವೀರಶೈವವೆಂದ ಮತ್ತೆ. ಇವ ಮೀರಲಿಲ್ಲ, ಪಂಚಾಚಾರ ಶುದ್ಧಂಗೆ. ಇಂತೀ ಪಥವನೇರಿ ಬದುಕಿ, ನಿಃಕಳಂಕ ಮಲ್ಲಿಕಾರ್ಜುನಾ.