Index   ವಚನ - 686    Search  
 
ಲಿಂಗಾಲಯದಲ್ಲಿ ಸತ್ತಿತ್ತೆಂದು, ಸಂಪ್ರೋಕ್ಷಣವ ಮಾಡಬೇಕೆಂಬ ಸಂದೇಹಿಗಳ ನೋಡಿರೆ. ಲಿಂಗಮಧ್ಯದಲ್ಲಿ ಜಗದಳಿವುಳಿವೆಂಬುದನರಿಯದೆ, ಪ್ರೇತಲಿಂಗವೆಂದು ಭೂಸುರರು ಕೂಡಿ, ಜಗದೀಶಂಗೆ ಅಭಿಷೇಕವಂ ಮಾಡಿ ಘಾಸಿಯಾದರಲ್ಲಾ, ಸಂಗನಬಸವ ಮುಂತಾದ ಅಂಗಲಿಂಗಿಗಳೆಲ್ಲರು. ಸಂಗನಬಸವಣ್ಣಂಗೆ ಶೈವಸಂಗಮೇಶ್ವರನೇ ಗುರುವಾದ. ಪ್ರಾಣಲಿಂಗವೆಂದು ಇನ್ನಾರಿಗೆ ಹೇಳುವೆ ? ಇನ್ನು ಸಂದೇಹವಿಲ್ಲ, ನಾನಂಜುವೆನಯ್ಯಾ. ಬಂದ ಬಟ್ಟೆಯಲ್ಲಿ ಬರಲಾರದೆ, ಈ ದ್ವಂದ್ವವ ಹರಿಯಾ, ಜಂಗಮಪ್ರಾಣ ಸಂದಿಲ್ಲದಿಪ್ಪ ನಿಃಕಳಂಕ ಮಲ್ಲಿಕಾರ್ಜುನಾ.