Index   ವಚನ - 687    Search  
 
ಲೀಲಾಭಾವಿಯಾಗಿ ಯಾಕೆ ಬಂದೆನೆಂಬುದನರಿದು, ಸಾಕಾರದ ನೀತಿಯ ನಿರ್ಣಯವ ಕಂಡು, ಇನ್ನೇತರಿಂದ ಅಳಿವು, ಇನ್ನೇತರಿಂದ ಉಳಿವು ? ಈ ಉಭಯನೀತಿಯಲ್ಲಿ ನಿಂದು ಮೇಲಿಪ್ಪಾತನನರಿಯಲು, ಅದು ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.