Index   ವಚನ - 689    Search  
 
ಲೆಕ್ಕದಲ್ಲಿ ಲೇಪಿತವಾದವರಿಗೇಕೆ ಅಜಾತನ ಸುದ್ದಿ? ಪ್ರಖ್ಯಾತದಲ್ಲಿ ನೀತಿಯ ಹೇಳಿಹೆನೆಂದು ವೇಷದಲ್ಲಿ ಸುಳಿವರಿಗೇಕೆ ಪರದೋಷನಾಶನ ಸುದ್ದಿ? ಇವರೆಲ್ಲರೂ ಈಶನ ಭಾಷೆಯಲ್ಲಿ ಸಿಕ್ಕಿ, ಭೂಭಾರಕರಾದರು, ನಿಃಕಳಂಕ ಮಲ್ಲಿಕಾರ್ಜುನಾ.