Index   ವಚನ - 688    Search  
 
ಲೀಲೆಯರತು ಆಡುವರೆಲ್ಲರು, ಕಾಲಸಂಹಾರನ ಬಂಧುಗಳು. ಲೀಲಾಂಗನಾ ಸುಖವ ಕುರಿತು ಆಡುವರೆಲ್ಲರು, ಲೋಲೆಯ ಬಂಧುಗಳು. ಶೈಲಾಂಗನಾ ಲೀಲೆಯನಾಡುವರೆಲ್ಲರು, ಕಾಲನ ಬಂಧುಗಳು. ಲೀಲೆಯ ಜಾಳಿಸಾ, ಅಂಕಸೂನೆಗಾರ ನಿಃಕಳಂಕ ಮಲ್ಲಿಕಾರ್ಜುನಾ.