ವಿರಳವಿಲ್ಲದ ಮಣಿಗೆ ದಾರದ ಹಂಗೇಕೆ ?
ನಿರವಯಾಂಗಗೆ ಪರಿಭ್ರಮಣವೇತಕ್ಕೆ ?
ನಿರಾಳದಲ್ಲಿ ನಿಂದ ಸುಖಿಗೆ ವಿರಾಳದಲ್ಲಿ ಸುತ್ತಿ ತಿರುಹಲೇಕೆ ?
ಸಂಸಾರದ ಸುಖದುಃಖಮಂ ಮರೆದು,
ಅಂಗ ಮೊದಲು, ಮನವೆ ಕಡೆಯಾಗಿ ಮನುಜರ ಹಂಗ ಬಿಟ್ಟವಂಗೆ
ಮನೆಮನೆಯ ಹೊಗಲೇಕೆ ?
ತಲೆಹುಳಿತ ದನವಿನಂತೆ ಗಳುವಿನಾಸೆಗಾಗಿ
ಇವರಿಗೆ ಲಿಂಗದ ಅನುವಿನ ಆಸೆಯೇಕೆ ?
ಘನಮಹಿಮಾ, ಅಲಸಿದೆ ಅಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Viraḷavillada maṇige dārada haṅgēke?
Niravayāṅgage paribhramaṇavētakke?
Nirāḷadalli ninda sukhige virāḷadalli sutti tiruhalēke?
Sansārada sukhaduḥkhamaṁ maredu,
aṅga modalu, manave kaḍeyāgi manujara haṅga biṭṭavaṅge
manemaneya hogalēke?
Talehuḷita danavinante gaḷuvināsegāgi
ivarige liṅgada anuvina āseyēke?
Ghanamahimā, alaside an̄jide, niḥkaḷaṅka mallikārjunā.