ಸತ್ವಗೆಟ್ಟಲ್ಲಿ ಕಾಷ್ಠವನೂರಿ ನಡೆಯಬೇಕು. ಮತ್ತತ್ವವಿದ್ದಲ್ಲಿ ನಿಶ್ಚಯವ ಹೇಳಲಾಗಿ, ಮಹಾಪ್ರಸಾದವೆಂದು ಕೈಕೊಳಬೇಕು.
ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ, ಎನ್ನ ಸತ್ಯಕ್ಕೆ ನೀ ಸತಿಯಾದ ಕಾರಣ,
ಎನ್ನ ಸುಖದುಃಖ ನಿನ್ನ ಸುಖದುಃಖ, ಅನ್ಯವಿಲ್ಲ.
ಇದಕ್ಕೆ ಭಿನ್ನಭೇದವೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Satvageṭṭalli kāṣṭhavanūri naḍeyabēku. Mattatvaviddalli niścayava hēḷalāgi, mahāprasādavendu kaikoḷabēku.
Enna bhaktige nī śaktiyāda kāraṇa, enna satyakke nī satiyāda kāraṇa,
enna sukhaduḥkha ninna sukhaduḥkha, an'yavilla.
Idakke bhinnabhēdavēnu hēḷā, niḥkaḷaṅka mallikārjunā?