Index   ವಚನ - 732    Search  
 
ಸತಿ ಪುರುಷರಿಬ್ಬರಿಂದೊದಗಿದ ಸುಖ ಸತಿಗೋ, ಪುರುಷಂಗೋ? ಇದ ನಾ ವಿವರಿಸಲಂಜುವೆ. ಇನ್ನಾರಿಗೆ ಸುಖ ದುಃಖವೆಂಬೆ? ಕೂಟಸ್ಥದಿಂದ ಹುಟ್ಟಿದ ಶಿಶು, ಬೆಳೆಯಿತ್ತು ಹೆಂಗೂಸಿನ ಕೈಯಲ್ಲಿ. ಆ ಮಗು ಅವನಿಗೋ, ಅವಳಿಗೋ? ಬದುಕಿದಡೂ ಸುಖವಿಬ್ಬರಿಗೂ ಸರಿ. ಸತ್ತಡೂ ದುಃಖವಿಬ್ಬರಿಗೂ ಸರಿ, ಆ ಪುತ್ರನ ಇರವು. ಇದನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ?