ಸತ್ಕ್ರೀವಂತಂಗೆ ಭಕ್ತಸ್ಥಲವಿಲ್ಲ, ನಿರ್ಮಲಚಿತ್ತಂಗೆ ಮಾಹೇಶ್ವರಸ್ಥಲವಿಲ್ಲ.
ಪರಿಪೂರ್ಣಭಾವಿಗೆ ಪ್ರಸಾದಿಸ್ಥಲವಿಲ್ಲ,
ಉಭಯವನಳಿದವಂಗೆ ಪ್ರಾಣಲಿಂಗಿಸ್ಥಲವಿಲ್ಲ.
ಶ್ರುತದೃಷ್ಟ ಅನುಮಾನಕ್ಕೆ ಒಳಗಾಗನಾಗಿ ಶರಣಸ್ಥಲವಿಲ್ಲ.
ಕೂಡಿಹೆನೆಂಬ ಭಾವವಿಲ್ಲವಾಗಿ ಐಕ್ಯಸ್ಥಲವಿಲ್ಲ.
ಇಂತೀ ಸ್ಥಲದಿಂದ ಸ್ಥಲವನೆಯ್ದಿ, ಸ್ಥಲಲೇಪವಾದ ಮತ್ತೆ
ಮೀರಿದ ತೆರನ ನೀವೆ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Satkrīvantaṅge bhaktasthalavilla, nirmalacittaṅge māhēśvarasthalavilla.
Paripūrṇabhāvige prasādisthalavilla,
ubhayavanaḷidavaṅge prāṇaliṅgisthalavilla.
Śrutadr̥ṣṭa anumānakke oḷagāganāgi śaraṇasthalavilla.
Kūḍ'̔ihenemba bhāvavillavāgi aikyasthalavilla.
Intī sthaladinda sthalavaneydi, sthalalēpavāda matte
mīrida terana nīve balliri, niḥkaḷaṅka mallikārjunā.