ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು,
ಎನಗೆ ಹೇಳಿರಯ್ಯಾ, ಅರ್ಥಕೋ, ಪ್ರಾಣಕ್ಕೋ, ಅಪಮಾನಕ್ಕೋ?
ಅಂತಲ್ಲದೆ, ಉಂಬ ಓಗರಕ್ಕೋ, ಸಂತತ ಸಮಯೋಚಿತವನರಿವುದಕ್ಕೋ?
ಈ ಸಂಚಿತನವರಿಯದೆ ಮುಂಚಿತ್ತಾಗಿ ಉಂಬ,
ಅಶನಕ್ಕೆ ಕೈಯ ನೀಡಿ, ತಾ ಹಿಂಚಾಗಿ ಉಂಬ ಪ್ರಸಾದಿಯ ನೋಡಾ.
ಆಯತವೆಂದರಿಯದೆ, ಸ್ವಾಯತವೆಂದರಿಯದೆ,
ಸನ್ನಹಿತಪ್ರಸಾದವೆಂದರಿಯದೆ, ಹಮ್ಮುಬಿಮ್ಮಿಗೆ ಹೋರುವ
ಉನ್ಮತ್ತರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Samayācāravendu nēmakke hottu māḍutirpa sadbhaktaru,
enage hēḷirayyā, arthakō, prāṇakkō, apamānakkō?
Antallade, umba ōgarakkō, santata samayōcitavanarivudakkō?
Ī san̄citanavariyade mun̄cittāgi umba,
aśanakke kaiya nīḍi, tā hin̄cāgi umba prasādiya nōḍā.
Āyatavendariyade, svāyatavendariyade,
sannahitaprasādavendariyade, ham'mubim'mige hōruva
unmattaranēnembe, niḥkaḷaṅka mallikārjunā.