ಸರ್ಪನ ಸಲಹಿದಲ್ಲಿ, ಬೇರೆ ವಿಷವ ಸಲಹಲುಂಟೆ ?
ಸಸಿವೃಕ್ಷಂಗಳ ಸಲಹುವಲ್ಲಿ ಬೇರೆ ಫಲವ ಸಲಹಲುಂಟೆ ?
ಕ್ರೀ ನಿರ್ಧಾರವಾದಲ್ಲಿ, ಆಚಾರಕ್ಕೆ ಅಂಕುರ,
ಆಚಾರ ಅಂಕುರವಾದಲ್ಲಿ, ದಿವ್ಯಜ್ಞಾನ ಪಲ್ಲವಿಸಿತ್ತು.
ಆ ಪಲ್ಲವದ ಮರೆಯಲ್ಲಿ, ಪರತತ್ವ ವಸ್ತು ಫಲವಾಗಿ,
ಉಭಯದ ತೊಟ್ಟು ಹರಿದು ಬಿದ್ದ ಹಣ್ಣು, ಅಭೇದ್ಯ ಲಿಂಗಕ್ಕೆ ತೃಪ್ತಿಯಾಯಿತ್ತು.
ಇಂತೀ ಭಾವದ ಭ್ರಮೆಯ ಕಳೆದು, ಜೀವವಿಕಾರ ಹಿಂಗಿ,
ನಾ ನೀನೆಂಬ ಉಭಯದ ದೃಷ್ಟ ಏನೂ ಇಲ್ಲದೆ ನಿಂದುದು, ಪ್ರಾಣಲಿಂಗಸಬಂಧ.
ಆ ಸಂಬಂಧವ ಸ್ವೀಕರಿಸಿ ನಿಂದುದು ಪ್ರಾಣಲಿಂಗಿಯ ತೃಪ್ತಿ.
ಇಂತೀ ನಿಜದಲ್ಲಿ ತಾನು ತಾನಾಗಬಲ್ಲಡೆ, ಆತನೇ ಐಕ್ಯಾನುಭಾವಿ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sarpana salahidalli, bēre viṣava salahaluṇṭe?
Sasivr̥kṣaṅgaḷa salahuvalli bēre phalava salahaluṇṭe?
Krī nirdhāravādalli, ācārakke aṅkura,
ācāra aṅkuravādalli, divyajñāna pallavisittu.
Ā pallavada mareyalli, paratatva vastu phalavāgi,
ubhayada toṭṭu haridu bidda haṇṇu, abhēdya liṅgakke tr̥ptiyāyittu.
Intī bhāvada bhrameya kaḷedu, jīvavikāra hiṅgi,
nā nīnemba ubhayada dr̥ṣṭa ēnū illade nindudu, prāṇaliṅgasabandha.
Ā sambandhava svīkarisi nindudu prāṇaliṅgiya tr̥pti.
Intī nijadalli tānu tānāgaballaḍe, ātanē aikyānubhāvi,
niḥkaḷaṅka mallikārjunā.