Index   ವಚನ - 745    Search  
 
ಸರ್ವೆಂದ್ರಿಯಂಗಳ ಲಿಂಗಮುಖ ಮಾಡಿ, ಲಿಂಗಕ್ಕೆ ಕೊಡಬೇಕೆಂಬುದು, ತನ್ನಯ ಸಂದೇಹವೋ, ಲಿಂಗದ ಬಂಧವೋ ಎಂಬುದನರಿತು ಕೊಡುವಲ್ಲಿ, ಇಂದ್ರಿಯಂಗಳ ನೆನಹಿನಲ್ಲಿ ಲಿಂಗ ಬರಬೇಕೊ? ಲಿಂಗದ ನೆನಹಿನಲ್ಲಿ ಇಂದ್ರಿಯಂಗಳು ಎಯ್ದಬೇಕೊ? ಇಂತೀ ಉಭಯದ ಪ್ರಮಾಣು, ಸಂದೇಹದ ಅಪ್ರಮಾಣು. ಈ ಅರ್ಪಿತದಂಗ ಸಂಗವಾದಲ್ಲಿ, ತಿಲ ಎಣ್ಣೆಯಂತೆ, ಗಂಧ ಕುಸುಮದಂತೆ, ಲಿಂಗ ಇಂದ್ರಿಯಂಗಳ ಸಂದು ಒಂದೊಂದು ಕೂಡುವಲ್ಲಿ, ಎನ್ನಂಗದ ಮನದ ಕೊನೆಯ ಮೊನೆಯ ಮೇಲೆ ನೀ ಬಂದು ನಿಂದಡೆ, ಬಿಡುಗು ಸಂದೇಹ, ನಿಃಕಳಂಕ ಮಲ್ಲಿಕಾರ್ಜುನಾ.