ಸಾವಿರದಲ್ಲಿ ಒಂದು ರಜ್ಜು ಹರಿದಡೆ,
ಅದ ಸಾಗಿಸಿ ಕಡೆಹಾಸಬೇಕಲ್ಲದೆ,
ಗೈದು ಬಿಟ್ಟದೆ, ಒಂದರ ಹಿಂದೊಂದಳಿಯಿತ್ತು ಆ ಅಚ್ಚು.
ಬಂದುದನರಿದು ಮಾಡುವ ಭಕ್ತನ ದ್ವಂದ್ವದೊಳಗೊಂದು ತಪ್ಪಿದಡೆ,
ಅವ ಹಿಂದುಳಿದನೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sāviradalli ondu rajju haridaḍe,
ada sāgisi kaḍ'̔ehāsabēkallade,
gaidu biṭṭade, ondara hindondaḷiyittu ā accu.
Bandudanaridu māḍuva bhaktana dvandvadoḷagondu tappidaḍe,
ava hinduḷidanende, niḥkaḷaṅka mallikārjunā.