ಸಿದ್ಧರಸ ಲೇಸೆಂದಡೆ ತಾನಿದ್ದ ಕುಡಿಕೆ ಹೇಮವಾದುದಿಲ್ಲ,
ಲೋಹಕ್ಕಲ್ಲದೆ ವೇಧಿಸೂದಿಲ್ಲ.
ವಸ್ತು ಸರ್ವದಲ್ಲಿ ಸಂಪೂರ್ಣವಾಗಿರ್ದಡೇನು,
ತನ್ನನರುವರ ಹೃದಯದಲಲ್ಲದೆ ಇರದು.
ಸದಾಶಿವಮೂರ್ತಿಲಿಂಗದ ಇರವು,
ಇಂದ್ರಿಯವ ಕಟ್ಟಿ ವಸ್ತುವನರಿದಿಹೆನೆಂದಡೆ ಕರೆವ ಹಸುವಲ್ಲ.
ಇಂದ್ರಿಯವ ಬಿಟ್ಟು ವಸ್ತುವ ಹಿಡಿದಿಹೆನೆಂದಡೆ ಬಿಡಾಡಿಯಲ್ಲ.
ವಸ್ತುವನರಿವುದಕ್ಕೆ ಎರಡಳಿದು ಒಂದುಳಿಯಬೇಕು.
ಆ ಸಂದಿನ ಬೆಸುಗೆಯಲ್ಲಿ ಸಂದಿರುತಿಪ್ಪವರ ಅಂದವ ನೋಡಾ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sid'dharasa lēsendaḍe tānidda kuḍike hēmavādudilla,
lōhakkallade vēdhisūdilla.
Vastu sarvadalli sampūrṇavāgirdaḍēnu,
tannanaruvara hr̥dayadalallade iradu.
Sadāśivamūrtiliṅgada iravu,
indriyava kaṭṭi vastuvanaridihenendaḍe kareva hasuvalla.
Indriyava biṭṭu vastuva hiḍidihenendaḍe biḍāḍiyalla.
Vastuvanarivudakke eraḍaḷidu onduḷiyabēku.
Ā sandina besugeyalli sandirutippavara andava nōḍā,
niḥkaḷaṅka mallikārjunā.