Index   ವಚನ - 755    Search  
 
ಸುಗಂಧ ಕೊಡುವ ಮೃಗವೆಂದಡೆ, ನೋಯಿಸಿ ಬಂಧಿಸಿದಡೆ ಗಂಧ ಬಂದುದುಂಟೆ ದುರ್ಗಂಧವಲ್ಲದೆ? ಇಂತೀ ಅರಿವಿನ ತೆರದಲ್ಲಿ ನುಡಿವ, ಮಾತಿನ ಬ್ರಹ್ಮವ ಬಲ್ಲೆವೆಂದು, ಒತ್ತಿ ನುಡಿಯಬಹುದೆ, ಸಾತ್ವಿಕ ಸದಾತ್ಮರ? ಅವರಿಚ್ಫೆಯೊಳಿರ್ದು ಸುಚಿತ್ತವನರಿವುದು. ಭೃತ್ಯತ್ವದಿಂದ ತನಗೆ ಸಿಕ್ಕಿಚ್ಫೆಯ ಕಾಣಿಸಿಕೊಳಬೇಕಲ್ಲದೆ, ತಾ ಕಷ್ಟನಾಗಿ ಆ ಮಹಾತ್ಮರ ದೃಷ್ಟವ ನೋಡಿಹೆನೆಂದಡೆ, ಸ್ವಪ್ನದಲ್ಲಿಯೂ ತಲೆದೋರನಾಗಿ. ಇಂತೀ ನಿಶ್ಚಯದ ವಸ್ತುವನರಿತು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಬೆಚ್ಚಂತಿರಬೇಕು.