ಸುಗಂಧ ದುರ್ಗಂಧವೆಂಬುಭಯವ ನಾಸಿಕವರಿದು,
ಹೆರೆಹಿಂಗುವ ಪರಿಯಿನ್ನೆಂತೊ ?
ಸುಳಿವ ವಾಸನೆಗೆ ಮೊದಲೆ, ಅಲ್ಲ ಅಹುದೆಂಬುದನರಿತು,
ಅರ್ಪಿತವ ಮಾಡಬಲ್ಲಡೆ ಬಲ್ಲರೆಂಬೆ.
ಇಂತಿವರಲ್ಲಿ ಪ್ರಾಣಲಿಂಗಾರ್ಪಿತವುಳಿಯಿತ್ತು.
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sugandha durgandhavembubhayava nāsikavaridu,
herehiṅguva pariyinnento?
Suḷiva vāsanege modale, alla ahudembudanaritu,
arpitava māḍaballaḍe ballarembe.
Intivaralli prāṇaliṅgārpitavuḷiyittu.
Niḥkaḷaṅka mallikārjunā.