Index   ವಚನ - 757    Search  
 
ಸುಡುವ ಬೆಂಕಿಯ ತುದಿಮೊನೆಯಲ್ಲಿ, ಒಂದು ಅರಗಿನ ಮಣಿಮಾಡವಿದೆ ಮನೆಯಲ್ಲಿ ಬೂರದ ಹಾಸು ಹಾಕಿ, ನೀರಿನ ಮಂಚದ ಮೇಲೆ ನಾರಿಯರೆಲ್ಲರೂ ತಮ್ಮ ಕ್ರೀಡಾಭಾವಂಗಳಿಂದ ಮಲಗಿರಲಾಗಿ, ಅರಗಿನ ಮಾಡ ಎದ್ದುರಿದು, ನೀರ ಮಂಚವ ಸುಟ್ಟು, ಬೂರದ ಹಾಸು ಹೊತ್ತಿ, ನಾರಿಯರುರಿದು ಹೋಗಿ, ಉರಿವ ನಾಲಗೆ ಹರಿವ ನೀರ ಕೆಡಿಸಿತ್ತು. ಆ ಹರವರಿಯಲ್ಲಿ ಪರಿಹರಿಸಬಲ್ಲಡೆ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.