ಸ್ಥಲವ ಕಂಡಡೇನು ಸ್ಥಲವನರಿಯಬೇಕು.
ಸ್ಥಲವನರಿತಡೇನು ಸ್ಥಲವ ವೇಧಿಸಬೇಕು.
ಸ್ಥಲವ ವೇಧಿಸಿದಲ್ಲಿ ತಥ್ಯಮಿಥ್ಯಂಗಳು ಸತ್ತು,
ರಾಗದ್ವೇಷ ಪುಣ್ಯಪಾಪಂಗಳ ಎತ್ತಲೆಂದರಿಯದೆ,
ನಿಃಕಳಂಕ ಮಲ್ಲಿಕಾರ್ಜುನ ಸತ್ತನೆಂದು,
ಹೃದಯ ನಿಶ್ಚಯಿಸಿಕೊಂಡಿರಬೇಕು.
Art
Manuscript
Music
Courtesy:
Transliteration
Sthalava kaṇḍaḍēnu sthalavanariyabēku.
Sthalavanaritaḍēnu sthalava vēdhisabēku.
Sthalava vēdhisidalli tathyamithyaṅgaḷu sattu,
rāgadvēṣa puṇyapāpaṅgaḷa ettalendariyade,
niḥkaḷaṅka mallikārjuna sattanendu,
hr̥daya niścayisikoṇḍirabēku.