Index   ವಚನ - 763    Search  
 
ಸ್ಥಲವೆಂಬುದು ಘಟ, ಕುಳವೆಂಬುದು ಆತ್ಮ. ಇಂತೀ ಸ್ಥಲಕುಳವನರಿವುದು ಮಹಾಜ್ಞಾನ. ಇಂತೀ ಸ್ಥಲವನರಿತು, ಕುಳವ ಕಂಡು, ಇಂತೀ ಮೂರರ ಹೊಲಬ ಬಿಡಬೇಕು. ಬಿಡುವಲ್ಲಿ ಜಗವನರಿಯದೆ, ಅರಿವಲ್ಲಿ ಭವಕ್ಕೆ ಒಡಲಲ್ಲದೆ, ಈಚೆಯಡಿಯ ಬಿಟ್ಟು, ಆಚೆಯಡಿಯ ಮೆಟ್ಟದೆ, ನಿಹಿತದಡಿಯ ಮಡ ಮುಟ್ಟದೆ, ಉಂಗುಷ್ಟ ಊರದೆ, ದಾಟಬೇಕು ಆತನಡಿಗೆ, ನಿಃಕಳಂಕ ಮಲ್ಲಿಕಾರ್ಜುನಾ.