Index   ವಚನ - 762    Search  
 
ಸ್ಥಲವ ಕಂಡಡೇನು ಸ್ಥಲವನರಿಯಬೇಕು. ಸ್ಥಲವನರಿತಡೇನು ಸ್ಥಲವ ವೇಧಿಸಬೇಕು. ಸ್ಥಲವ ವೇಧಿಸಿದಲ್ಲಿ ತಥ್ಯಮಿಥ್ಯಂಗಳು ಸತ್ತು, ರಾಗದ್ವೇಷ ಪುಣ್ಯಪಾಪಂಗಳ ಎತ್ತಲೆಂದರಿಯದೆ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೆಂದು, ಹೃದಯ ನಿಶ್ಚಯಿಸಿಕೊಂಡಿರಬೇಕು.