Index   ವಚನ - 770    Search  
 
ಸ್ಥೂಲವಡಕೆಯಾದಂತೆ, ಸೂಕ್ಷ್ಮ ಪರ್ಣವಾದಂತೆ, ಕಾರಣ ಚೂರ್ಣವಾದಂತೆ, ಮೂರು ಕೂಡಿದ ಬಣ್ಣವಾಯಿತ್ತು. ಇದರ ಭೇದವನರಿವವರನಾರನು ಕಾಣೆ. ಅದರ ಸ್ವಾದವ ಸವಿವ ಭೇದಕಂಗಲ್ಲದೆ ಅನಾದಿಸಂಸಿದ್ಧಿಯಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.