Index   ವಚನ - 804    Search  
 
ಹೇರಂಡದ ಬಿತ್ತ ತುಳಿದು, ವಾರಿಯ ಕಲಸಿ ಬೇಯಿಸಿದಲ್ಲಿ, ವಾರಿ ಬೇರೆ, ತಾ ಬೇರಾದ ಭೇದವ ಬಲ್ಲಡೆ, ಇಷ್ಟಲಿಂಗಸಂಬಂಧಿ. ಹುಡಿಯ ಕೂಡಿದ ನೀರು ಕದಡಿ ಏಕವಾದಲ್ಲಿ, ಹುಡಿಯನಡಗಿಸಿ, ನೀರ ನಿರ್ಮಲವ ಮಾಡಬಲ್ಲಡೆ, ಭಾವಲಿಂಗಸಂಬಂಧಿ. ರುಚಿ ನೀರಿನಲ್ಲಿ ಕರಗಿ ತನ್ನಯ ಅಂಗ ಕುರುಹಳಿದಲ್ಲಿ, ಆ ತೆರನನರಿದಲ್ಲಿ ಪ್ರಾಣಲಿಂಗಸಂಬಂಧಿ. ಆ ಸಂಬಂಧವ ಸಂಬಂಧಿಸಿದಲ್ಲಿ ಉಭಯದ ಸೆರಗು ಕಲೆದೋರದೆ ನಿಂದುದು, ಐಕ್ಯಾನುಭಾವ. ಅದು ಮಹಾಶರಣನ ಐಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.