Index   ವಚನ - 811    Search  
 
ಹೊಲನ ಗೆಯ್ದು ಮನೆಗೆ ಬರಲಾಗಿ, ನಿಲಿಕಿ ನೋಡಿ ಕಂಡೆನು, ಮನೆಯೊಡತಿಯ. ಎನ್ನ ಕಂಡು ಹಿಡಿದಿರ್ದೊನಕೆಯ ಮಡಗಿ, ಅಡಬೇಕೆಂದು ಹೋಗಿ, ಅಡುವ ಗಡಿಗೆಯ ಕಾಣದೆ, ತಡವಡಿಸಿ ನೋಡುತ್ತಿರ್ದಳಯ್ಯಾ, ಎನ್ನ ಕಂಡು ಕಡುಗಲಿಗಂಜಿ. ಒರಳೊಳಗೆ ಅಕ್ಕಿಯಿಲ್ಲ, ಮಾಡುವುದಕ್ಕೆ ಮೊರನಿಲ್ಲ, ತೊಳೆವುದಕ್ಕೆ ನೀರಿಲ್ಲ. ಇಂತಿವಳ ಮನೆವಾರ್ತೆಯ ಕಂಡು, ಒಗೆತನಗೆಟ್ಟು, ಬದುಕಬೇಡಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.