Index   ವಚನ - 810    Search  
 
ಹೊಲದವರೆಯ ನಡೆದು ಸೊಡಗೆಯ ಸುಲಿದಲ್ಲಿ, ತಳಿಲು ಬಲಿದು ಒಡೆದುದಿಲ್ಲ. ಬಿತ್ತವಟ್ಟಕ್ಕೆ ಮೊದಲೆ ಕೂಳೆಹೋಯಿತ್ತು. ಹೊಲದವನಿಗೆ ಒಮ್ಮನವಾದುದಿಲ್ಲ. ಇಮ್ಮನ ಸೊಡಗೆಯ ಮೆದ್ದು,ಕರ್ಮಕ್ಕೀಡಾದವರ ನುಡಿಯೆಂದಡೆ, ಎನ್ನ ಹಮ್ಮಿಗನೆಂಬರು. ಅವರಿಗೆ ಹಾಕಿದ ಗಾಣ ಸಾಕು, ನಿಲ್ಲು, ನಿಃಕಳಂಕ ಮಲ್ಲಿಕಾರ್ಜುನಾ.