ಆತ್ಮ ನಿಸ್ಸಂಗತ್ವದ ಇರವು:
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚತತ್ವದ ಮಧ್ಯದಲ್ಲಿ ಪುದಿದಿಪ್ಪ ಆತ್ಮನ ಒಡೆಯನನರಿವಾಗ,
ಪೃಥ್ವಿ ಪೃಥ್ವಿಯ ಕೂಡಿತ್ತು, ಅಪ್ಪು ಅಪ್ಪುವ ಕೂಡಿತ್ತು.
ತೇಜ ತೇಜವ ಕೂಡಿತ್ತು, ವಾಯು ವಾಯುವ ಕೂಡಿತ್ತು.
ಆಕಾಶ ಆಕಾಶವ ಕೂಡಿತ್ತು.
ಆ ಪಂಚತತ್ವವು ಒಂದರೊಳಗೊಂದು ಕೂಡಿದಲ್ಲಿ,
ಆತ್ಮನ ಪಾಪ ಪುಣ್ಯವಾವುದು?
ಬೇರೊಂದು ಠಾವಿನಲ್ಲಿ ನಿಂದು ಅರಿವ ತೆರನಾವುದು?
ಅದರ ಕುರುಹು ಕೇಳಿಹರೆಂದು
ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ!
Art
Manuscript
Music
Courtesy:
Transliteration
Ātma nis'saṅgatvada iravu:
Pr̥thvi appu tēja vāyu ākāśavemba
pan̄catatvada madhyadalli pudidippa ātmana oḍeyananarivāga,
pr̥thvi pr̥thviya kūḍittu, appu appuva kūḍittu.
Tēja tējava kūḍittu, vāyu vāyuva kūḍittu.
Ākāśa ākāśava kūḍittu.
Ā pan̄catatvavu ondaroḷagondu kūḍidalli,
ātmana pāpa puṇyavāvudu?
Bērondu ṭhāvinalli nindu ariva teranāvudu?
Adara kuruhu kēḷiharendu
alēkhanāda śūn'ya kallina mareyādeyallā!