ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ,
ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ,
ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ,
ನಾನರಿಯದೆ ಕುರುಹ ಹಿಡಿದು,
ಅದು ಎನ್ನ ಮರವೆಯ ಮನಕ್ಕೆ ತೆರಹಾಗದು.
ನಾನರಿವಡೆ ಎನ್ನ ಒಡಗೂಡಿದ್ದ ತುಡುಗುಣಿ ಬೆನ್ನಬಿಡದು.
ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ
ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ?
ಬಿಡು ಬಡವೊಡೆಯನ, ಬಿಡದಿದ್ದಡೆ ಕಲ್ಲೆದೆಯಾಗು.
ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ್ದ ಕಠಿಣವ ನಂಬಿ.
ಇದರ ಬಲ್ಲತನವ ಹೇಳಾ, ಅಲೇಖನಾದ
ಶೂನ್ಯ ಕಲ್ಲಿನ ಮರೆಯಾದವನೆ.
Art
Manuscript
Music
Courtesy:
Transliteration
Kallina hōḷa bellavendu makkaḷa kaiyalli koṭṭaḍe,
hallinalli kaḍidu, nālageyalli nan̄ji,
bellavallā endu hāki maneyavarellara kāḍuvante,
nānariyade kuruha hiḍidu,
adu enna maraveya manakke terahāgadu.
Nānarivaḍe enna oḍagūḍidda tuḍuguṇi bennabiḍadu.
Oḍeya satuvillade baḍavana baṇṭanāda matte
bāya hoḍeyisikombudakke an̄jalēke?
Biḍu baḍavoḍeyana, biḍadiddaḍe kalledeyāgu.
Ivarellara vidhi enagāyittu, kaiyallidda kaṭhiṇava nambi.
Idara ballatanava hēḷā, alēkhanāda
śūn'ya kallina mareyādavane.