ಕಂಬಳಿಯ ಕೌಪ ಕಟ್ಟಿದ ಮತ್ತೆ,
ಅವರವರ ಬೆಂಬಳಿಯಲ್ಲಿ ಕಂಬಳಿಯ
ಹೊದ್ದಿಹೆನೆಂಬ ಆಸೆಯೇಕೆ?
ಹೊದೆಯಲಿಲ್ಲದ ಕಂಬಳಿಯ ಉಡಿಗೆ ಕಟ್ಟಿದ ಮತ್ತೆ,
ಈ ಕೈಯ ಗಡಿಗೆಯಣ್ಣಗಳ ಒಡಗೂಡಲೇಕೆ?
ಅವರ ತೊಡೆಯ ಸಂದಿಯಲ್ಲಿ ಕುಳಿತು,
ಅವರಾಡುವ ಮಾತಿಗೆ ಅಡುಮೆಯಾಗಲೇಕೆ?
ಇಂತಿವನರಿದಹರೆಂದಡಗಿದ,
ಅಲೇಖನಾದ ಶೂನ್ಯ ಕಲ್ಲಿನ ಮರೆಯಾದ
Art
Manuscript
Music
Courtesy:
Transliteration
Kambaḷiya kaupa kaṭṭida matte,
avaravara bembaḷiyalli kambaḷiya
hoddihenemba āseyēke?
Hodeyalillada kambaḷiya uḍige kaṭṭida matte,
ī kaiya gaḍigeyaṇṇagaḷa oḍagūḍalēke?
Avara toḍeya sandiyalli kuḷitu,
avarāḍuva mātige aḍumeyāgalēke?
Intivanaridaharendaḍagida,
alēkhanāda śūn'ya kallina mareyāda