ನಿನ್ನನರಿವುದಕ್ಕೆ ಅಲ್ಲಿ ಇಲ್ಲಿ ಗೆಲ್ಲ ಸೋಲವೇಕೆ?
ಎಲ್ಲರಲ್ಲಿ ಅಹುದು ಅಲ್ಲಾ ಎಂಬ
ಕಲ್ಲೆದೆಯಾಗಿ ಹೋರಲೇಕೆ?
ಅಮೃತವ ಕೊಂಡು ಸವಿವುಂಟೆ ಎಂದು ಎಲ್ಲರ ಕೇಳುವನಂತೆ,
ತಿಗರನೇರಿಸಿ ಕಲಿತನವ ಕೊಡೆಂಬವನಂತೆ,
ಅಮೃತ ಘುಟಿಕೆಯಿದ್ದು, ಅಶನದ
ಮುದ್ದೆಯ ಕೇಳಿ ಗಸಣಿಗೊಂಬವನಂತೆ,
ಈ ಹುಸುಕರಿಗೆ ಅಂಜಬೇಡ,
ಅಲೇಖನಾದ ಶೂನ್ಯ ಕಲ್ಲಿನ ಮನೆಯ ಬಿಟ್ಟು
ನೆಲೆಗೊಳ್ಳೆನ್ನೊಳು, ಬೇಡ.