Index   ವಚನ - 30    Search  
 
ಒಡೆಯರ ಸಮಯಾಚಾರವೆಂದ ಮತ್ತೆ ಹಲ್ಲುಕಡ್ಡಿ, ದರ್ಪಣ, ನಖಚಣ, ಮೆಟ್ಟಡಿ ಮುಂತಾದ ತಾ ಮುಟ್ಟುವ, ತಾ ತಟ್ಟುವ, ಸೋಂಕುವ, ತನ್ನಯ ಸಂದೇಹ ಮುಂತಾದ ದಿಟ ಮೊದಲು ಹುಸಿ ಕಡೆಯಾದ ದ್ರವ್ಯವೆಲ್ಲವನು ಕೊಟ್ಟು ತಾ ಕೊಳ್ಳದಿದ್ದನಾಯಿತ್ತಾದಡೆ ಬೈವುದಕ್ಕೆ ಬಾಯಿ ತೆರಪಿಲ್ಲ; ಹೊಯ್ವದಕ್ಕೆ ಕೈಗೆ ಅಡಹಿಲ್ಲ. ನೋಡುವ ಕಣ್ಣನೆ ಮುಚ್ಚುವೆ, ಈ ನೋವನಿನ್ನಾರಿಗೂ ಹೇಳೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ನೀನೇ ಬಲ್ಲೆ.