Index   ವಚನ - 38    Search  
 
ಕೂಪಜಲವ ಬಳಸುವನ್ನಕ್ಕ, ಲವಣ ಬಳಕೆ ಸಾರೋಪಿತ ದ್ರವ್ಯವನ್ನರಿಯಬೇಕು. ಸರ್ವಸಂಗ್ರಹಗಳಲ್ಲಿ ಸೌಕರ್ಯವ ತಿಳಿಯಬೇಕು. ಪರ್ಣ ಫಲಂಗಳಲ್ಲಿ ಪುನರಪಿ ಪ್ರಕ್ಷಾಲನವ ಮಾಡಬೇಕು. ಕೂಪೋದಕವ ತ್ರಿಪಾವಡೆಯಲ್ಲಿ ಸೋದಿಸಬೇಕು. ಇಂತಿವು ಸಂತೋಷ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಅರ್ಪಿತ.