Index   ವಚನ - 86    Search  
 
ಪಂಚಾಚಾರವ ಧರಿಸಿದ ಶರೀರಕ್ಕೆ ಅಷ್ಟೋತ್ತರಶತವ್ಯಾಧಿ ಬಂದಿತ್ತೆಂದು ಕಲ್ಪಿಸಬಹುದೆ? ಪಾದತೀರ್ಥ ಪ್ರಸಾದವೆಂದು ನೈಷ್ಠಿಕದಲ್ಲಿ ಕೊಂಬ ಜಿಹ್ವೆ, ಔಷಧಿ ಕಷಾಯ ಕೊಂಡಡೆ ಪಂಚಾಚಾರಕ್ಕೆ ದೂರ; ಪಾದೋದಕ ಪ್ರಸಾದವಿಲ್ಲ ಇಹಪರಕ್ಕೆ ಸಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಅವರನೊಲ್ಲ.