Index   ವಚನ - 129    Search  
 
ವ್ರತವೆಂಬುದೇನು? ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು. ಜಗದ ಕಾಮಿಯಂತೆ ಕಾಮಿಸದೆ, ಜಗದ ಕ್ರೋಧಿಯಂತೆ ಕ್ರೋಧಿಸದೆ, ಜಗದ ಲೋಭಿಯಂತೆ ಲೋಭಿಸದೆ, ಮಾಯಾ ಮೋಹಂಗಳು ವರ್ಜಿತವಾಗಿ ಮನ ಬಂದಂತೆ ಆಡದೆ, ತನು ಬಂದಂತೆ ಕೂಡದೆ ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.