ಸರ್ವಶೀಲದ ವ್ರತದಾಯತವೆಂತುಟೆಂದಡೆ:
ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು.
ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು.
ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು.
ಅದೆಂತೆಂದಡೆ:
ಗುರುವಿಗೂ ಗುರು ಉಂಟಾಗಿ,
ಲಿಂಗಕ್ಕೂ ಉಭಯಸಂಬಂಧ ಉಂಟಾಗಿ.
ಆ ಜಂಗಮಕ್ಕೂ ಗುರುಲಿಂಗ ಉಭಯವುಂಟಾಗಿ
ಜಂಗಮವಾದ ಕಾರಣ.
ಇಂತೀ ಗುರುಲಿಂಗಜಂಗಮಕ್ಕೂ
ಪಂಚಾಚಾರ ಶುದ್ಧವಾಗಿರಬೇಕು.
ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ
ಸತಿಗೆ ಸ್ವತಂತ್ರ ಉಂಟೆ?
ಇಂತೀ ಉಭಯದ ವ್ರತವೊಡಗೂಡಿದಲ್ಲಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವೆ ವಸ್ತು.
Art
Manuscript
Music
Courtesy:
Transliteration
Sarvaśīlada vratadāyataventuṭendaḍe:
Tanna vratavillada guruva pūjisalāgadu.
Vratavillada jaṅgamada prasādava koḷalāgadu.
Vratavilladavara aṅgaḷava meṭṭalāgadu.
Adentendaḍe:
Guruvigū guru uṇṭāgi,
liṅgakkū ubhayasambandha uṇṭāgi.
Ā jaṅgamakkū guruliṅga ubhayavuṇṭāgi
jaṅgamavāda kāraṇa.
Intī guruliṅgajaṅgamakkū
pan̄cācāra śud'dhavāgirabēku.
Puruṣana ācāradalli sati naḍeyabēkallade
satige svatantra uṇṭe?
Intī ubhayada vratavoḍagūḍidalli
ācārave prāṇavāda rāmēśvaraliṅgakke vratave vastu.