Index   ವಚನ - 148    Search  
 
ಸೆರೆಗೆ ಸತಿ ಸಿಕ್ಕಿದಲ್ಲಿ ಅಪಮಾನವನರಸಲಿಲ್ಲ. ಹುತ್ತವನೇರಿ ಹುಲ್ಲ ಕಚ್ಚಿದಲ್ಲಿ ಪಟುಭಟತನವನರಸಲಿಲ್ಲ. ವ್ರತಾಚಾರಕ್ಕರ್ಹನಾಗಿ ಭವಿ ದ್ರವ್ಯವನೊಲ್ಲೆನೆಂದು ಆ ಭವಿಯ ಸೀಮೆಯ ಭಕ್ತನ ಕೈಯಿಂದಕೊಂಡು ಭಕ್ತ ಕೊಟ್ಟನೆಂದು ತಕ್ಕೊಂಬ ಮಿಟ್ಟೆಯ ಭಂಡನ ಶೀಲ ಸಿಕ್ಕಿತ್ತು. ಹೊಸ್ತಲ ಪೂಜಿಸುವ ಪಾಣ್ಬೆಯಂತಾಯಿತ್ತು. ಇನ್ನಾರಿಗೆ ಹೇಳುವೆ ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವೆ ನೀನೆ ಬಲ್ಲೆ.