ಅಧೋಮುಖದಷ್ಟದಳಕಮಲದಲ್ಲಿ
ಹಂಸಗತಿ ಮನದ ನಡೆವಳಿಯಿಂದ ದಿಗ್ವಳಯದ
ಅಷ್ಟಗುಣಯುಕ್ತವಾಗಿಹನು.
ಇದಲ್ಲದೆ ಮತ್ತೆಯು ನಿಧನ ಚಿಂತೆ ಲಜ್ಜೆ ಕ್ಷುಧ
ತೃಷೆ ವಿಷಯ ಆಧಿವ್ಯಾಧಿದ್ಯೂತೋದ್ಯೋಗ ದಾಹ
ಶೋಷ ರತಿ ಸ್ವೇದ ಕೋಪ ಶೋಕ ಉದ್ಬ್ರಮೆ ಭಯ ಎಂಬ
ಹದಿನೆಂಟು ದೋಷವರಣನಾಗಿ ಅಜ್ಞಾನದಿಂ ತಿರುಗುವ ಜೀವನು
ಶ್ರುತಗುರು ಸ್ವಾನುಭಾವದಿಂ
ಪರಮನ ಗತಿಯನರಿತು ತನ್ನ ಗತಿಯ ಮೆರೆದು,
ದಶವಾಯುವ ದೆಸೆಗೆ ಹರಿಯದೆ,
ಮಧ್ಯನಾಳದಲ್ಲಿ ನಿಂದ ಮರುವಾಳ ಮರೆದು
ಸೌರಾಷ್ಟ್ರ ಸೋಮೇಶ್ವರಲಿಂದ ಬೆಳಗಿನೊಳಗೆ
ಬೆರಸಿ ಬೇರಿಲ್ಲದ ಶಿಖಿಕರ್ಪುರದಂತಾಯಿತ್ತು.
Art
Manuscript
Music
Courtesy:
Transliteration
Adhōmukhadaṣṭadaḷakamaladalli
hansagati manada naḍevaḷiyinda digvaḷayada
aṣṭaguṇayuktavāgihanu.
Idallade matteyu nidhana cinte lajje kṣudha
tr̥ṣe viṣaya ādhivyādhidyūtōdyōga dāha
śōṣa rati svēda kōpa śōka udbrame bhaya emba
hadineṇṭu dōṣavaraṇanāgi ajñānadiṁ tiruguva jīvanu
śrutaguru svānubhāvadiṁ
paramana gatiyanaritu tanna gatiya meredu,
daśavāyuva desege hariyade,
madhyanāḷadalli ninda maruvāḷa maredu
saurāṣṭra sōmēśvaralinda beḷaginoḷage
berasi bērillada śikhikarpuradantāyittu.