Index   ವಚನ - 74    Search  
 
ಆಶ್ರಯನಲ್ಲ ಅನಾಶ್ರಯನಲ್ಲ, ದ್ವೈತಿಯಲ್ಲ ಅದ್ವೈತಿಯಲ್ಲ. ದೇಹವಿಲ್ಲದ ಲಿಂಗ, ಪ್ರಾಣವಿಲ್ಲದ ಶರಣ, ಉಭಯವಿಲ್ಲದ ಪರಮಾತ್ಮ, ಪರಮೈಕ್ಯನಿರ್ಗಮನಗಮನಿ, ಅರಿವುದಕ್ಕೆ ಒಡಲಿಲ್ಲದ ಭರಿತ, ಅನುಭಾವಕ್ಕೆ ಬಾರದ ಅಗಣಿತ ಸ್ವತಂತ್ರ, ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಪ್ರತಿಹಿತ.