Index   ವಚನ - 117    Search  
 
ಕಾಯದ ಕೈಮುಟ್ಟಿ ಲಿಂಗಕ್ಕರ್ಪಿಸಿದೆನಂದಡೆ ಅನರ್ಪಿತ, ಅಂಗದೊಳಗೆ ಲಿಂಗ ತನ್ಮಯನಾಗಿ ಪ್ರಾಣಾನುಪ್ರಪಂಚ ಮರೆದಿರಲು, ಆ ಅಂಗವೇ ಲಿಂಗಕ್ಕರ್ಪಿತವಾಗಿ ಪ್ರಸಾದಕಾಯವಪ್ಪುದು. ಇಂತಾದ ಬಳಿಕ ಅಂಗ ಸೋಂಕಿಲ್ಲದೆ ಲಿಂಗ ಸೋಂಕಾಗಿರ್ಪುದಾಗಿ ಅರಿದು ಮರೆದು ಅರ್ಪಿತ ಅನರ್ಪಿತವೆಂಬ ಭ್ರಾಂತು ಸೂತಕವಿಲ್ಲ. ನಿಭ್ರಾಂತ, ನಿಸ್ಸಂದೇಹಿ, ಸೌರಾಷ್ಟ್ರ ಸೋಮೇಶ್ವರ ಲಿಂಗವಲ್ಲದನ್ನ ಸೊಗಸದ ಪ್ರಸಾದಿ.