ಕೆಲರು ಚತುರ್ವೇದಭಾರಕರಾದರು,
ಕೆಲರು ಆಗಮಂಗಳಲ್ಲಿ ಸವೆದರು,
ಕೆಲರು ಷಟ್‍ತರ್ಕಂಗಳಲ್ಲಿ ಮೋಹಿಸಿದರು,
ಅಲ್ಲದೆ ತಾರಕ್ರಹ್ಮವನರಿತುದಿಲ್ಲ.
ಅದೆಂತೆಂದೊಡೆ:
ಕೇಚಿದಾಗಮಜಾಲೇಷು ಕೇಚಿನ್ನಿಗಮಸಂಚಯೇ
ಕೇಚಿತ್ತರ್ಕೇಣ ಮುದ್ಯಂತಿ ನೈವ ಜಾನಂತಿ ತಾರಕಂ
ಎಂದುದಾಗಿ
ಜ್ಞಾನಾಜ್ಞಾನದ ಮಧ್ಯದಲ್ಲಿ ಕರ್ಮಬಲದಲ್ಲಿ ಹುಟ್ಟಿದ
ಚೌರಾಶಿ ಜೀವರಾಶಿಗಳಲ್ಲಿಲ್ಲ.
ಪಂಚೇಂದ್ರಿಯಪ್ರೀತಿಯಿಂದ ನಡೆವ ಪ್ರಾಣಿಗಳೆಲ್ಲರು
ಲಿಂಗವನರಿಯದೆ ಕಾಲಚಕ್ರ ಕರ್ಮಚಕ್ರ ಪ್ರಳಯಚಕ್ರಕ್ಕೊಳಗಾದರು.
ಸೌರಾಷ್ಟ್ರ ಸೋಮೇಶ್ವರಲಿಂಗವ ಪೂಜಿಸಬಂದು,
ಲಿಂಗದ ಮರೆದ ಕಾರಣ.
Art
Manuscript
Music
Courtesy:
Transliteration
Kelaru caturvēdabhārakarādaru,
kelaru āgamaṅgaḷalli savedaru,
kelaru ṣaṭtarkaṅgaḷalli mōhisidaru,
allade tārakrahmavanaritudilla.
Adentendoḍe:
Kēcidāgamajālēṣu kēcinnigamasan̄cayē
kēcittarkēṇa mudyanti naiva jānanti tārakaṁ
endudāgi
jñānājñānada madhyadalli karmabaladalli huṭṭida
caurāśi jīvarāśigaḷallilla.
Pan̄cēndriyaprītiyinda naḍeva prāṇigaḷellaru
liṅgavanariyade kālacakra karmacakra praḷayacakrakkoḷagādaru.
Saurāṣṭra sōmēśvaraliṅgava pūjisabandu,
liṅgada mareda kāraṇa.