Index   ವಚನ - 193    Search  
 
ತನುಮನಧನ ತನ್ನವೆಂಬ ಬಳಕೆಯಳಿದು, ಹಿಡಿವಲ್ಲಿ ಬಿಡುವಲ್ಲಿ ತಾನೆಂಬ ಭಾವ ತಲೆದೋರದೆ ಶಿವನೆ ಸ್ವಾಮಿಯೆಂದು ಒಡೆಯರೊಡವೆಯ ಒಡೆಯರಿಗೊಪ್ಪಿಸುವಾಳಿನಂತೆ ತನುಮನಧನವ ಗುರುಲಿಂಗಜಂಗಮಕ್ಕೆ ಜ್ಞಾನದ ಕರದಲ್ಲಿ ನೀಡಿ, ಲಿಂಗದಲ್ಲಿ ಏನೊಂದುವ ಬಯಸದೆ, ನಿರುಪಾಧಿಕ ದಾಸೋಹಿ ತಾನಾಗಿ, ಖ್ಯಾತಿಲಾಭದ ಪೂಜೆಯ ಹೊಗದೆ, ಶಿವಶರಣರಲ್ಲಿ ಗೆಲ್ಲವಳಿದು ಸೋಲವಳವಟ್ಟು, ಹಮ್ಮಳಿದು ವಿನಯಗುಂದದೆ ಅಂಗಭೀತಿ ಮಾನಭೀತಿ ಪ್ರಾಣಭೀತಿಯ ಬಿಟ್ಟು, ನಿರ್ಭೀತಿಯಳವಟ್ಟು ಆನು ನಿಮ್ಮೊಳು ಎರಡಳಿದಿರ್ಪಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.