Index   ವಚನ - 281    Search  
 
ಬೆಚ್ಚು ಬೇರಿಲ್ಲದ ಸುಖವಚ್ಚಾದ ಪರಿಯ ನೋಡಾ ಅಯ್ಯಾ. ಅಂಗವಿಲ್ಲದ ಕೂಟ, ಸಮರಸವಿಲ್ಲದ ಬೇಟ, ಸಮರತಿಯಿಲ್ಲದಾನಂದ ಸನ್ನಿಹಿತವಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗದ ಸಂಗ, ಏನೂ ಅಲ್ಲದ ನಿಸ್ಸಂಗದ ನಿಜಸುಖವೇನೆಂಬೆನಯ್ಯಾ.