Index   ವಚನ - 4    Search  
 
ಎನಬಹುದು ಎನಬಾರದು; ಜನರಿಂಗೆ ವೈರವರ್ಗ ಜ್ಞಾನಕ್ಕವರ್ಗ ಕನಸಿನಲಿ ಕಾಣಿಸುವುದು. ಮನಸಿನಲಿ ಉಚ್ಚರಿಸಿದಷ್ಟು ನೆನದ ದುಃಖ ಬಹುದು. ನೇಮದ ಕಲೆನೆಲೆಯನರಿತು ಅನುಶ್ರುತ ಶಿವಸನ್ನಿಧಿಯೊಳು ಮನವರತು ಇದ್ದರೆ ಮನ ವಾಚಾ ಸಿದ್ಧಿ, ವಾಚಾಮನಸಿದ್ಧಿಯಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ