Index   ವಚನ - 6    Search  
 
ಶರೀರ ಭಿನ್ನ, ಪರಮಾತ್ಮ ಏಕವೆಂಬುದೇ ವೇದವಾಕ್ಯ. ಶರೀರ ಗೊಹೇಶ್ವರ, ಈಶ್ವರ ಪರಮಾರ್ಥ, ಪರಿಪೂರ್ಣನೆಂಬುದೇ ಭಕ್ತಿವಾಕ್ಯ. ವನಚರವಿದೇಕೆ? ಚರವಿದೇಕೆ? ನರರೇನ ಬಲ್ಲರಯ್ಯ ಅಪ್ರತಿಮಲಿಂಗಾಂಗವ? ಅರುಹಿನ ತಿರುಳು, ಮರಹಿನ ಮರುಳು, ಕರುಳು ಕಡುಸೂತ್ರ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.