Index   ವಚನ - 16    Search  
 
ತನ್ನ ಧರ್ಮಕೆ ನೀಡಿಸುವ ಅನ್ನ ಉದಕ ಅರವಟ್ಟಿಗೆ ಕೆರೆ ಬಾವಿ ಉನ್ನತವಿತ್ತವಿತ್ತ, ಮನದಂತೆ ಮಾಂಗಲ್ಯ ಘನಮಹಾಲಿಂಗವು ನನ್ನದು ತನ್ನದು ಎಂಬ ಭಿನ್ನಭಾವದ ಭ್ರಾಂತು ಭವಿಗಳು ಅನಿತ್ಯವೆಂಬರು. ಸೊನ್ನಾರಿಯಲ್ಲಿ ಹುಟ್ಟಿದ ಹೊನ್ನು ಸೊನ್ನಾರಿಯ ಮಗನೆ? ಉನ್ಮತ್ತದಲ್ಲಿ ಹುಟ್ಟಿದ ಹೆಣ್ಣು ಉನ್ಮತ್ತದ ಮಗಳೆ? ತನ್ಮಯದಲ್ಲಿ ಹುಟ್ಟಿದ ಮಣ್ಣು ತನ್ಮಯದ ಮಗನೆ? ಸನ್ಮನ ಮೂರರ ಮಾಯವೆ ಅಭ್ರಚ್ಛಾಯೆ ಗೊಹೇಶ್ವರಲಿಂಗನ ಉಪಾಯವು. ನನ್ನದು ನಿನ್ನದುಯೆಂದು ಹೋರಾಡುವ ಅನ್ಯಾಯಿಗಳ ಮಾತಕೇಳಲಾಗದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.