Index   ವಚನ - 19    Search  
 
ಕುರುವ ಹಿಡಿವರೆ ಗುರು ಕರಜಾತ. ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ? ವರಲಿಂಗ ಕರುಣದಿಂದ ವ್ಯರ್ಥವೆ ಅರ್ಥವಾಯಿತು. ಪರಮ ತೃಪ್ತ ತಾನು ತಾನಾದ ಬಳಿಕ ಪರಿಕ್ಷುಪ್ತವುಂಟೆ? ವರಕೃಪೆಯುಳ್ಳ ವಸ್ತುವಿನ ವಚನವಂತಗೆ ಸಲ್ಲದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.