Index   ವಚನ - 29    Search  
 
ಗುರು ತೀರ್ಥಪ್ರಸಾದ ಅರುಹಿನಘಟ್ಟಿ ದೊರಕೊಂಬುದೆ ನರಕೀಲಕರಿಗೆ ಬರಿಯ ಮಾತಿನಮಾಲೆ ಕೊಳುಕೊಡೆಯಲ್ಲವು. ಕರವೆತ್ತಿ ಕೊಟ್ಟಾತ ಗುರುವಲ್ಲ; ಕೊಂಡಾತ ಶಿಷ್ಯನಲ್ಲ. ನಿರುತ ನಿಜಗೊಹೇಶ್ವರನಲ್ಲಿ ಬೆರದು ಕೊಂಬುದು ತೀರ್ಥ; ಅರಿತು ಕೊಂಬುದು ಪ್ರಸಾದ. ಮರೆಯಿದು ಮಾಟ, ಮರ್ತ್ಯದ ಕೂಟ, ಮತಿಗೆ ಬೇಟ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.