Index   ವಚನ - 30    Search  
 
ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೇನಯ್ಯಾ? ಪಾಡಿಗೆ ಪಂಥ ಪರಾಕ್ರಮಿ ಪರದಳವಿಭಾಡನಾಪನೆ? ಕೋಡಗನ ಕೈಯಲ್ಲಿ ರತ್ನವಿದ್ದರೆ ರಾಜ್ಯರಾಷ್ಟ್ರದೊಳು ಬೆಲೆಗಾಬುದೆ? ಮೋಡಕ್ಕೆ ಬಾಯಿದೆರದರೇನು ಕಾಲಕಾಲಕ್ಕೆ ಮಳೆಬಹುದೆ? ಹೂಡುವರೆ ಕುದುರೆ ಕೋಣದ ರಥ ಶೃಂಗಾರಕ್ಕೆ? ಕಾಡಿನೊಳು ಕರದ ಮಳೆ, ಓಡಿನೊಳು ಎರದ ನೀರು ಮೂಡುವೀ ಕ್ರಿಯೆಯ ಪೂಜೆಯು ಬೇಡನ ಬೇಟೆಯ ನಾಯಿ ಮೊಲನಕಂಡು ಆಚರಿಸಿದಂತಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.