Index   ವಚನ - 31    Search  
 
ಬಲ್ಲೆ ಬಲ್ಲಿದರೆಂಬ ಅಹಂಕಾರಿಗೆ ಸಲ್ಲದು ಭಕ್ತಿ. ಹುಲ್ಲ ಬೆಂಕಿಯೊಳು ಕೆಂಡ ನಿಲ್ಲುವುದೆ ಹುದುಗಿ ಮುಚ್ಚಿದರೆ? ಹಲ್ಲಣವ ಕತ್ತೆಗೆ ಹಾಕಿದರೆ ಉತ್ತಮ ತೇಜಿಯಾದಪುದೆ? ಎಲ್ಲಿಯ ಭಕ್ತಿ? ಎಲ್ಲಿ ಮುಕ್ತಿ? ಸಲ್ಲದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.