Index   ವಚನ - 33    Search  
 
ಮಲಿನವುಂಟೆ ಮಹಾಸಮುದ್ರಕ್ಕೆ? ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ? ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ ಪ್ರಿಯವೆ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.